ಕಲಾಮಂಡಲಂ ಕ್ಷೇಮಾವತಿ ಅವರು ಕೇರಳದ ತ್ರಿಶೂರ್‌ ಗ್ರಾಮದಲ್ಲಿ ೧೯೪೮ ರಲ್ಲಿ ಹುಟ್ಟಿದರು. ಇವರು ಮೋಹಿನಿಯಾಟ್ಟಂನ ಒಬ್ಬ ಪ್ರಮುಖ ನಾಟ್ಯಗಾರ್ತಿ. ಅವರು ಕೇರಳ ಕಲಾಮಂಡಲಂನ ಹಳೆಯ ವಿದ್ಯಾರ್ಥಿನಿಯಾಗಿದ್ದರು. ಅವರು ತಮ್ಮ ಹತ್ತನೇ ವಯಸ್ಸಿಗೆ ಈ ಸಂಸ್ಥೆಗೆ ಸೇರಿದರು. ತಮ್ಮ ಕೋರ್ಸ್ ಮುಗಿದ ನಂತರ, ಅವರು ಮುತ್ತುಸ್ವಾಮಿ ಪಿಳ್ಳೈ ಮತ್ತು ಚಿತ್ರಾ ವಿಶ್ವೇಶ್ವರನ್ ಅವರಲ್ಲಿ ಭರತ ನಾಟ್ಯಂನಲ್ಲಿ ಮತ್ತು ವೆಂಪಟಿ ಚಿನ್ನ ಸತ್ಯಂ ಅವರ ಅಡಿಯಲ್ಲಿ ಕೂಚಿಪುಡಿಯಲ್ಲಿ ಉನ್ನತ ತರಬೇತಿಯನ್ನು ಪಡೆದರು. ಆದರೆ ಮೋಹಿನಿಯಾಟ್ಟಂ ಸಂಪ್ರದಾಯದಲ್ಲಿ ಉಳಿಯಲು ನಿರ್ಧರಿಸಿದ ನಂತರ ಅದರಲ್ಲೇ ಮುಂದುವರಿಸಿದರು. == ಸಾಧನೆಗಳು == ಮೋಹಿನಿಯಾಟ್ಟಂ‌ಗೆ ಅವರು ನೀಡಿರುವ ಕೊಡುಗೆಗಳಿಗಾಗಿ ೨೦೧೧ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಕೂಡಾ ಪಡೆದಿದ್ದಾರೆ. ಅವರು ೧೯೭೫ ರಲ್ಲಿ ಕೇರಳದಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು (ಭರತನಾಟ್ಯಕ್ಕಾಗಿ) ಮತ್ತು ೨೦೧೫ ರಲ್ಲಿ ಕೇರಳ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್‌ಅನ್ನು ಪಡೆದಿದ್ದರು. ಕ್ಷೇಮಾವತಿ ಅವರು ತಮ್ಮ ಅಭಿನಯ ಮತ್ತು ಕಲಾ ಪ್ರಕಾರದ ಸಾಂಪ್ರದಾಯಿಕ ವಿಧಾನಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಸಂಶೋಧನೆಯನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಪ್ರಯೋಗವು ಅನಿವಾರ್ಯವಾಗಿದೆ ಎಂದು ನಂಬುತ್ತಾರೆ. ಅವರು ನೃತ್ಯ ಶಾಲೆಯು ಜರ್ಮನಿ, ಫ್ರಾನ್ಸ್, ಸ್ವೀಡನ್ ಮತ್ತು ಫಿನ್‌ಲ್ಯಾಂಡ್‌ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಗುರುತಿಸಲ್ಪಟ್ಟಿದೆ. ಚೆರ್ರುಸ್ಸೇರಿ ಮತ್ತು ಸುಗತಕುಮಾರಿ, "ಕುಚೇಲವೃತ್ತಂ", ಚಿಂತವಿಷ್ಟಯ ಸೀತೆ, ಲೀಲಾ ಮುಂತಾದ ಶ್ರೇಷ್ಠತೆಗಳು ಮತ್ತು ಗಜಲ್‌ಗಳು ಸೇರಿದಂತೆ ಸುಮಾರು ೧೦೦ ಕವಿತೆಗಳಿಗೆ ಅವರು ದೃಶ್ಯ ಪ್ರಾತಿನಿಧ್ಯವನ್ನು ನೀಡಿದ್ದಾರೆ. ಅವರು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಶಿಕ್ಷಕಿ. == ವೈಯಕ್ತಿಕ ಜೀವನ == ಕ್ಷೇಮಾವತಿ ಅವರು ವಿಕೆ ಪವಿತ್ರನ್ ಅವರ ಪತ್ನಿ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಅವರು ಇವಾ ಪವಿತ್ರನ್ ಮತ್ತು ಲಕ್ಷ್ಮಿ ಪವಿತ್ರನ್. == ಚಿತ್ರಕಥೆ == === ನಟಿಸಿರುವ ಚಲನಚಿತ್ರಗಳು === === ನೃತ್ಯ ನಿರ್ದೇಶನಗಳು === == ಉಲ್ಲೇಖಗಳು ==